Posts

ದಿನಕ್ಕೊಂದು ಕಥೆ 1109

*🌻ದಿನಕ್ಕೊಂದು ಕಥೆ🌻* ಪಾಂಡುರಂಗನ ಪರಮ ಭಕ್ತನಾದ ಸಂತ ತುಕಾರಾಮರು ನಿರಂತರವಾಗಿ ಪಾಂಡುರಂಗನ ನಾಮಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಒಂದು ಸಲ ಅವರ ತಂದೆಯ ಶ್ರಾಧ್ಧ ಇತ್ತು. ಶ್ರಾದ್ಧದಲ್ಲಿ ಅರ್ಥ ಮೃತ್ಯು ಹೊಂದಿದ ವ್ಯಕ್ತಿಗಳ ಪುಣ್ಯತಿಥಿ. ಶ್ರಾದ್ಧದಲ್ಲಿ ಇಬ್ಬರು ಬ್ರಾಹ್ಮಣರಿಗೆ ಕರೆದು ಅವರಿಗೆ ಫಲ ಮತ್ತು ದಕ್ಷಿಣೆ ಕೊಟ್ಟ ಮೇಲೆಯೇ ಮನೆಯ ಸದಸ್ಯರೆಲ್ಲರೂ ಭೋಜನ ಮಾಡಬೇಕಿತ್ತು. ಅವರ ಪತ್ನಿ ಜೀಜಾಯಿ ಅಗತ್ಯವಿರುವ ಸಾಮಾನು ಬೇಗನೆ ತರಲು ಹೇಳಿದಳು. ತುಕಾರಾಮರು ಮನೆಯಿಂದ ಹೊರಟರು. ಮಾರ್ಗದಲ್ಲಿ ಅವರು ಪಾಂಡುರಂಗನ ನಾಮಸ್ಮರಣೆ ಮಾಡುತ್ತಿದ್ದರು. ಅವರು ಊರನ್ನು ದಾಟಿದ ಮೇಲೆ ಒಂದು ಹೊಲದಲ್ಲಿ (ಗದ್ದೆ) ಫಸಲು ತೆಗೆಯುತ್ತಿದ್ದನ್ನು ನೋಡಿದರು. ತುಕರಾಮನನ್ನು ನೋಡಿ ರೈತನು ’ಎನು ಕೆಲಸ ಮಾಡುವೆ? ಕೆಲಸ ಮಾಡಿದರೆ ದುಡ್ಡು ಮತ್ತು ಅದರ ಜೊತೆಗೆ ದಿನಸಿ ಕೂಡಾ ಕೊಡುವೆ" ಎಂದನು.#ಆಧ್ಯಾತ್ಮಿಕ_ಕಥೆಗಳು ತುಕಾರಾಮರು ಹೊಲದಲ್ಲಿ ಹೋಗಿ ಫಸಲು ಕಡೆಯುತ್ತ ಮನೆಯ ಕೆಲಸವನ್ನು ಮರೆತುಬಿಟ್ಟರು. ಮಧ್ಯಾಹ್ನ ಸಮೀಪಿಸುತ್ತಿತ್ತು. ಜೀಜಾಯಿಗೆ ಎನು ಮಾಡಬೇಕು ಎಂದು ತಿಳಿಯದಾಯಿತು. ಸ್ವಲ್ಪ ಸಮಯದ ನಂತರ ತುಕರಾಮರು ಮನಗೆ ಹಿಂತಿರುಗಿದರು. ಜೀಜಾಯಿ ಹೇಳಿದ ಸಾಮಾನುಗಳನೆಲ್ಲ ತಂದಿದ್ದರು. ಜೀಜಾಯಿ ಬೇಗನೆ ತಯಾರಿ ಮಾಡುತ್ತಿದ್ದರು. ತುಕರಾಮರು ನದಿಗೆ ಹೋಗಿ ಸ್ನಾನ ಮಾಡಿ ಬಂದರು. ಅಷ್ಟರಲ್ಲೆ ಬ್ರಹ್ಮಣರು ಮನೆಗೆ ಬಂದರು. ತುಕರಾಮರು ಅವರಿಗೆ ಹಣ್ಣು ಮತ್ತು ಹಾ

ದಿನಕ್ಕೊಂದು ಕಥೆ 1108

*🌻ದಿನಕ್ಕೊಂದು ಕಥೆ🌻* *ಬೇವಿನ ಮರ ನುಡಿದ ಸಾಕ್ಷಿ* ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಸಿದ್ದಪ್ಪ ಹೊಸಮನಿ ಎಂಬ ಒಬ್ಬ ವಕೀಲರಿದ್ದರು.  ಅನ್ಯಾಯದ ವಿರುದ್ದ ಸಿಡಿದೇಳುತ್ತಿದ್ದ ಅವರು ಬಡವರ ಬಗೆಗೆ, ಶೋಷಣೆಗೆ ಒಳಗಾದವರ ಬಗೆಗೆ, ಅನುಕಂಪ ಮೃದು ಭಾವನೆಗಳನ್ನು ಹೊಂದಿದ್ದರು.  ತುಳಿತಕ್ಕೆ ಒಳಗಾದವರ ನೆರವಿಗೆ ಅವರು ಧಾವಿಸುತ್ತಿದ್ದರು. ಒಂದು ಸಲ ಹೀಗಾಯಿತು.  ಒಬ್ಬ ಬಡ ರೈತನು ಮಾರವಾಡಿಯೊಬ್ಬನ ಬಳಿ ಸಾಲ ತಂದಿದ್ದನು.  ತಾನು ಪಡೆದ ಸಾಲವನ್ನು ಅವನು ಆ ಮಾರವಾಡಿಗೆ ಕೊಟ್ಟು ಮುಟ್ಟಿಸಿದ್ದನು.  ಆದರೆ ಆ ಮಾರವಾಡಿ ಸಾಲ ಮರುಪಾವತಿ ಆದ ಬಗೆಗೆ, ರೈತನಿಗೆ ದಾಖಲೆ ಏನನ್ನೂ ನೀಡಿರಲಿಲ್ಲ.  ತನ್ನ ಲೆಕ್ಕದ ಪುಸ್ತಕದಲ್ಲಿ ಸಾಲದ ಬಾಕಿ ಹಾಗೆಯೇ ಇದೆಯೆಂದು ತೋರಿಸಿ ಸಾಲ ವಸೂಲಿಯ ಬಗೆಗೆ, ಆ ರೈತನ ವಿರುದ್ಧ ದಾವಾ ಹೂಡಿದ್ದನು.   ಆ ಬಡ ರೈತ, ವಕೀಲರ ಸಂಘಕ್ಕೆ ಬಂದು ತನ್ನ ಪರವಾಗಿ ವಕಾಲತ್ತು ವಹಿಸಬೇಕೆಂದು ಅನೇಕರನ್ನು ಅಂಗಲಾಚಿ ಬೇಡಿಕೊಂಡ.  “ನೀನು ಸಾಲವನ್ನು ಹಿಂತಿರುಗಿಸಿದ ಬಗೆಗೆ ನಿನ್ನ ಬಳಿ ಸಾಕ್ಷಿ ಪುರಾವೆಗಳು ಏನಾದರೂ ಇವೆಯೇ?” ಎಂದು ಅವರೆಲ್ಲರೂ ಅವನನ್ನು ಕೇಳಿದ್ದರು.  “ನಾನು ದೇವರ ಪ್ರಮಾಣ ಮಾಡಿ ಹೇಳುತ್ತೇನೆ.  ನಮ್ಮ ಹೊಲದ ಸಮೀಪದಲ್ಲಿ ಇರುವ ಬೇವಿನ ಮರದ ಕೆಳಗೆ, ಎಲ್ಲ ಸಾಲ ಚುಕ್ತಾ ಮಾಡಿದ್ದೇನೆ” ಎಂದು ಹೇಳಿದಾಗ, ಅವರೆಲ್ಲರೂ ನಕ್ಕು, “ಹುಚ್ಚಪ್ಪ, ಕೋರ್ಟು, ನಿನ್ನ ದೇವರನ್ನೂ ಕೇಳುವುದಿಲ್ಲ, ನಿನ್ನ ಬೇವಿ

ದಿನಕ್ಕೊಂದು ಕಥೆ 1107

*🌻ದಿನಕ್ಕೊಂದು ಕಥೆ🌻* *ಹೂವು ಕಲಿಸಿದ ಪಾಠ* ಒಬ್ಬ ಹುಡುಗನಿಗೆ ಸ್ವಲ್ಪ ದುಡುಕು  ಸ್ವಭಾವ. ತನಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡುವುದೇ ಇಲ್ಲ ಎಂಬ ಮನೋಭಾವದವನು. ಅವನಪ್ಪನಿಗೆ ಮಗನ  ಈ ಸ್ವಭಾವ ‌ ಇಷ್ಟವಾಗುತ್ತಿರಲಿಲ್ಲ. ಮಗನಿಗೆ ತೊಂದರೆ ಆಗಿದ್ದು ನಿಜವೇ.ಅವನ ಮನಸ್ಸಿಗೆ ನೋವಾಗಿದ್ದು ನಿಜವೇ. ಹಾಗೆಂದ ಮಾತ್ರಕ್ಕೆ , ಹೋಗು  ನೀನೂ ಅವರಿಗೆ ತೊಂದರೆ ಕೊಡು ಎಂದು ಹೇಳುವುದು, ಅಪ್ಪನ ಜವಾಬ್ದಾರಿಯಲ್ಲ. ಆದರೆ ಹೀಗೆ ಮಾಡಬೇಡ ಎಂದು ಮಗನಿಗೆ ಹೇಳಿದರೆ, ಅವನಿಗೆ ಇನ್ನಷ್ಟು ಕೋಪ ಜಾಸ್ತಿಯಾಗುತ್ತದೆ. ತನ್ನ ಅಪ್ಪ ಕೂಡ ತನ್ನನ್ನು ನಂಬುವುದಿಲ್ಲವೆಂದು ಅವನಿಗೆ ಬೇಸರವಾಗುತ್ತದೆ. ಆದರೆ ಪ್ರಪಂಚದಲ್ಲಿ, ನಾವು ಹೇಗೆ ಬದುಕಬೇಕು ಎಂಬುದನ್ನು ಮಗನಿಗೆ ತಿಳಿಸುವುದು ತಂದೆಯಾದವನ  ಕರ್ತವ್ಯ, ಎಂದುಕೊಂಡಿದ್ದ ಆತ.       ಪ್ರತಿದಿನ ಮಗನಿಗೆ,  ತನಗೆ ತೊಂದರೆ ಕೊಟ್ಟವರ ಮೇಲೆ ,ಹೇಗೆ ಸೇಡುತೀರಿಸಿಕೊಳ್ಳಬೇಕೆಂಬ ಯೋಚನೆ. ಅಪ್ಪನಿಗೆ ಮಗನನ್ನು ಇದರಿಂದ ಹೇಗೆ ಹೊರ ತರುವುದು, ಎಂಬ ಯೋಚನೆ.ಅವನ ದುಡುಕು ಸ್ವಭಾವದಿಂದ ಯಾರಿಗೂ ತೊಂದರೆಯಾಗದಂತೆ ಅವನನ್ನು ತಡೆಯುವುದು ಹೇಗೆ ಎಂಬ ಚಿಂತೆ ಅಪ್ಪನದು. ಇದು  ಅಪ್ಪನ ಕರ್ತವ್ಯ ಕೂಡ ಎಂದುಕೊಂಡಿದ್ದ ಆತ . ಹೀಗೆ ಅಪ್ಪ ಮಗ ಇಬ್ಬರೂ ತಮ್ಮ ತಮ್ಮ ಯೋಚನೆಯಲ್ಲಿ ಇದ್ದರು.        ಒಂದು ದಿನ ದೇವರ ಪೂಜೆಗಾಗಿ ಬುಟ್ಟಿಯಲ್ಲಿ ಇಟ್ಟ ವಿವಿಧ ಬಣ್ಣ ಬಣ್ಣದ ಸುವಾಸನೆಯುಕ್ತ ಹೂಗಳು, ಮನೆಯ ತುಂಬೆಲ್

ದಿನಕ್ಕೊಂದು ಕಥೆ 1106

*🌻ದಿನಕ್ಕೊಂದು ಕಥೆ🌻* *ಸಮಸ್ತ ಸೃಷ್ಟಿಯ ಪಾಲಕ ಭಗವಂತ* ಮಹಾರಾಷ್ಟ್ರದ ಸಮರ್ಥ ರಾಮದಾಸ ಸ್ವಾಮಿಗಳು ಒಬ್ಬ ಮಹಾನ ಸಂತರಾಗಿದ್ದರು. ಅವರು ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರದ ಮಹಾನ ದೈವಭಕ್ತ ರಾಜನಾಗಿದ್ದ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಒಂದು ದಿನ ಶಿವಾಜಿ ಮಹಾರಾಜರು ಮತ್ತು ಅವರ ಗುರುಗಳು ಅರಮನೆಯ ಒಳಗೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು, ಆಗ ರಾಜನು ’ನಿಜವಾಗಿಯೂ ನಾನೊಬ್ಬ ಮಹಾನ ರಾಜನಾಗಿದ್ದೇನೆ, ನಾನು ನನ್ನ ಎಲ್ಲ ವಿಷಯಗಳಲ್ಲಿಯೂ ಎಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತೇನೆ!’ ಎಂದು ವಿಚಾರ ಮಾಡುತ್ತಿದ್ದನು. ಗುರುಗಳು ತಮ್ಮ ದಿವ್ಯ ಜ್ಞಾನದಿಂದ ಶಿಷ್ಯನ ಮನಸ್ಸಿನಲ್ಲಿ ಬಂದ ವಿಚಾರವನ್ನು ತಿಳಿದುಕೊಂಡರು ಮತ್ತು ಕೂಡಲೇ ಅವನ ವಿಚಾರವನ್ನು ಸರಿಪಡಿಸಬೇಕೆಂದು ತೀರ್ಮಾನಿಸಿದರು. ಸಮೀಪದಲ್ಲಿಯೇ ದೊಡ್ಡದಾದ ಬಂಡೆಯೊಂದು ಇತ್ತು. ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರ ಕೆಲವು ಸೈನಿಕರನ್ನು ಕರೆದು ಆ ಬಂಡೆಯನ್ನು ಎರಡು ತುಂಡಾಗುವಂತೆ ಒಡೆಯಲು ಹೇಳಿದರು. ಅವರ ಮಾತಿನಂತೆ ಸೈನಿಕರು ಬಂಡೆ ಕಲ್ಲನ್ನು ಒಡೆದಾಗ, ಅಲ್ಲಿ ಉಪಸ್ಥಿತರಿದ್ದ ಎಲ್ಲರೂ, ನಂಬಲು ಅಸಾಧ್ಯವಾದ ದೃಷ್ಯವೊಂದನ್ನು ನೋಡಿದರು. ಆ ಕಲ್ಲುಬಂಡೆಯಲ್ಲಿ ಒಂದು ನೀರು ತುಂಬಿಕೊಂಡಿದ್ದ ಪೊಳ್ಳುಭಾಗವೊಂದಿತ್ತು, ಅದರಲ್ಲಿ ಒಂದು ಸಣ್ಣ ಕಪ್ಪೆಯಿತ್ತು. ಬಂಡೆಯು ಸೀಳಿ ಎರಡು ತುಂಡಾದ ಕೂಡಲೇ ಅದರಲ್ಲಿ ಬಂಧಿಸಲ್ಪಟ್ಟಿದ್ದ ಕಪ್ಪೆಯು ಸ್ವತಂತ್ರಗೊಂಡು ಹೊರಗೆ ಜಿಗಿಯಿತು. ಈಗ ಸಮರ

ದಿನಕ್ಕೊಂದು ಕಥೆ 1105

*🌻ದಿನಕ್ಕೊಂದು ಕಥೆ🌻* ಸಂತ ಶ್ರೀ ಗೋರಾ ಕುಂಭಾರ ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠಲನ ಭಕ್ತನಿದ್ದನು. ಕುಂಬಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಯಾವಾಗಲು ಅವನು ಪಾಂಡುರಂಗನ ನಾಮಜಪದಲ್ಲಿ ಮಗ್ನನಾಗಿರುತ್ತಿದ್ದನು. ಒಂದು ಸಲ ಅವನ ಪತ್ನಿ ಅವರ ಒಂದೇ ಮಗನನ್ನು ಅಂಗಳದಲ್ಲಿ ಬಿಟ್ಟು ನೀರು ತರಲು ಹೋದಳು. ಆ ಸಮಯದಲ್ಲಿ ಗೋರಾಕುಂಬಾರನು ಗಡುಗೆಯನ್ನು ಮಾಡಲು ಅವಶ್ಯವಾಗಿರುವ ಮಣ್ಣನ್ನು ಕಾಲಿನಿಂದ ತುಳಿಯುತ್ತಾ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಅದರಲ್ಲಿ ಅವನು ಬಹಳ ತಲ್ಲೀನನಾಗಿದ್ದನು. ಪಕ್ಕದಲ್ಲೇ ಆಡುತ್ತಿರುವ ಚಿಕ್ಕ ಮಗು ಅಳುತ್ತ ಬಂದು ಆ ಮಣ್ಣಿನಲ್ಲಿ ಬಿದ್ದು ಬಿಟ್ಟಿತು. ಗೋರಾ ಕುಂಬಾರನು ಮಣ್ಣನ್ನು ಮೇಲೆ ಕೆಳಗೆ ಮಾಡಿ ತುಳಿಯುತ್ತಿದ್ದನು. ಮಣ್ಣಿನ ಜೊತೆಗೆ ತನ್ನ ಮಗುವನ್ನೂ ತುಳಿದು ಬಿಟ್ಟನು. ಪಾಂಡುರಂಗನ ಭಜನೆಯಲ್ಲಿ ಮಗ್ನನಾಗಿರುವದರಿಂದ ಮಗುವಿನ ಅಳುವು ಅವನಿಗೆ ಕೇಳಿಸಲೇ ಇಲ್ಲ. ನೀರು ತಂದ ಮೇಲೆ ಅವನ ಪತ್ನಿ ಮಗುವನ್ನು ಹುಡುಕುತ್ತಿದ್ದಳು. ಬಾಲಕ ಸಿಗದ ಕಾರಣ ಅವಳು ಗೋರಕುಂಬಾರನ ಬಳಿ ಹೋದಳು. ಅಷ್ಟರಲ್ಲಿ ಅವಳ ದೃಷ್ಟಿ ಮಣ್ಣಿನ ಕಿಚಡಿಯಲ್ಲಿ ಹೋಯಿತು, ಕಿಚಡಿಯಲ್ಲಿ ಇರುವ ಕೆಂಪು ರಕ್ತವನ್ನು ನೋಡಿ, ಮಗು ಕೂಡ ಆ ಮಣ್ಣಿನಲ್ಲಿ ತುಳಿಯಲ್ಪಟ್ಟಿದೆ ಅಂತ ತಿಳಿಯಿತು. ಅವಳು ಜೋರಾಗಿ ಚೀರಿದಳು ಮತ್ತು ಗಂಡನ ಮೇಲೆ ಸಿಟ್ಟು ಮಾಡಿದಳು. ಅರಿವಿಲ್ಲದೆ ಮಾಡಿರುವ ಈ ಕೃತ್ಯಕ್ಕಾಗಿ ಗೋರಾ ಕುಂ

ದಿನಕ್ಕೊಂದು ಕಥೆ 1104

*🌻ದಿನಕ್ಕೊಂದು ಕಥೆ🌻*            *ಅಪ್ಪ* *ಲೇಖಕರು: ವತ್ಸಲಾ ಶ್ರೀಶ*   ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು. ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು. ಹೆಂಡತಿ ಒಳಗೆ ಬಂದು ನನ್ನೊಡನೆ ರೇಗಿಯೇ ಬಿಟ್ಟಳು. ನನಗೂ ಅಂದು ಏನಾಯಿತೋ ಏನೋ. ಅಪ್ಪನ ರೂಮಿಗೆ ಹೋದೆ..ಅಪ್ಪಾ  ನಡೆಯುವಾಗ ಗೋಡೆ ಹಿಡಿಯದೆ ನಡೆಯಲು ಪ್ರಯತ್ನಿಸಬಾರದೇ ಎಂದೆ..ಧ್ವನಿಯಲ್ಲಿದ್ದ ಅಸಹನೆ ಅತಿಯಾಯಿತೇನೋ ಅನಿಸಿತು.ಅಪ್ಪ ನನ್ನೆಡೆಗೆ ನೋಡಿದರು.  80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು.ಅಪ್ಪ ಮೌನವಾಗಿ ತಲೆತಗ್ಗಿಸಿದರು.…ಛೇ ನಾನು ಹಾಗನ್ನಬಾರದಿತ್ತು ಎಂದೆನಿಸಿತು…ಸ್ವಾಭಿಮಾನಿಯಾಗಿದ್ದ ಅಪ್ಪ  ಮುಂದೆ ಮೌನಿಯಾದರು. ಆ ಮೇಲೆ ಗೋಡೆ ಹಿಡಿದು ನಡೆಯಲಿಲ್ಲ..ಅದೊಂದು  ದಿನ ಅಪ್ಪ ಆಯತಪ್ಪಿ ಬಿದ್ದು ಹಾಸಿಗೆ ಹಿಡಿದರು. ಮತ್ತೆರಡು ದಿನದಲ್ಲಿ ಇಹಲೋಕವನ್ನು ತ್ಯಜಿಸಿದರು. ಗೋಡೆಯಲ್ಲಿ ಮೂಡಿದ್ದ ಅಪ್ಪನ ಕೈ ಗುರುತು ಕಾಣುವಾಗ ಎದೆಯೊಳಗೆ ಏನೋ ಸಿಕ್ಕಿದಂತಾಗುತ್ತಿತ್ತು.      ದಿನಗಳು ಉರುಳುತ್ತಿತ್ತು. ಅದೊಂದು ದಿನ ಹೆಂಡತಿ ಎಲ್ಲಾ ಗೋಡೆಗಳಿಗೆ ಬಣ್ಣ ಹೊಡೆಯಬೇಕೆಂದಳು..ಬಣ್ಣ ಹೊಡೆಯುವ

ದಿನಕ್ಕೊಂದು ಕಥೆ 1103

*🌻ದಿನಕ್ಕೊಂದು ಕಥೆ🌻*  *ಒಬ್ಬರಿಗೊಬ್ಬರ ಅವಹೇಳನ  ಚಪ್ಪಡಿ ಎಳೆದುಕೊಂಡಂತೆ* ಅದೊಂದು  ದೊಡ್ಡ ಗ್ರಾಮ. ಅಲ್ಲಿ ಅನೇಕಾನೇಕ  ವಿದ್ವಾಂಸರಗಳು, ಪಂಡಿತೋತ್ತಮರಿದ್ದರು. ಆಸುಪಾಸಿನ ಊರವರಿಗೆಲ್ಲ  ಪಂಡಿತೋತ್ತಮರ ಊರು  ಎಂದೇ  ಪರಿಚಿತವಾಗಿತ್ತು. ಆ ಊರಿನ ಹತ್ತಿರ ಭಾರಿ  ಶ್ರೀಮಂತ  ಸೇಟು ಒಬ್ಬನಿದ್ದನು.  ಬುದ್ಧಿವಂತ, ಹಾಗೂ ಧರ್ಮಿಷ್ಠನಾಗಿದ್ದನು. ಒಮ್ಮೆ ಅದೇ ಊರಿನ  ಇಬ್ಬರು ವಿದ್ವಾಂಸರನ್ನು ತನ್ನ ಮನೆಗೆ  ಆಹ್ವಾನಿಸಿದನು. ವಿದ್ವಾಂಸರಿಬ್ಬರು ಶ್ರೀಮಂತ ಸೇಟು ಬೇಕಾದಷ್ಟು ಕೊಡುತ್ತಾನೆಂಬ  ಆಸೆಯಿಂದ ಅವನ ಮನೆಗೆ ಬಂದರು. ವಿದ್ವಾಂಸರು ಮನೆಗೆ ಬರುತ್ತಿದ್ದಂತೆ ಸೇಟು ಆದರದಿಂದ ಸ್ವಾಗತಿಸಿ, ಪ್ರಯಾಣ ಸುಖಕರವಾಗಿತ್ತೆ  ಎಂದು ವಿಚಾರಿಸಿದನು. ಒಬ್ಬ ಪಂಡಿತ ತುಂಬಾ ಆರಾಮವಾಗಿ ಬಂದೆವು,  ವಿಚಾರಿಸಿದ ನಿಮ್ಮ  ಔದಾರ್ಯ ಬಹಳ ದೊಡ್ಡತನ ಎಂದನು.  ಸೇಟು ಇಬ್ಬರಿಗೂ ಬಾಯಾರಿಕೆಗೆ  ಆಸರೆ  ಕೊಟ್ಟು, ನಂತರ ಬಿಸಿಲಲ್ಲಿ ಬಂದಿದ್ದೀರಿ  ಸ್ನಾನ ಮಾಡಿ.  ಭೋಜನದ ವ್ಯವಸ್ಥೆ  ಮಾಡಿಸುತ್ತೇನೆ  ಎಂದನು. ಒಬ್ಬ ಪಂಡಿತ ಎದ್ದು  ಸ್ನಾನಕ್ಕೆ ಹೋದನು, ಇನ್ನೊಬ್ಬ ಪಂಡಿತ ಅವನು ಬಂದ ನಂತರ ಹೋಗಲು ಅಲ್ಲೇ ಕುಳಿತಿದ್ದನು.  ಆ ಸಮಯಕ್ಕೆ ಅಲ್ಲಿಗೆ ಬಂದ ಸೇಟು ಊರಿನ ಕಡೆಯೆಲ್ಲಾ  ಚೆನ್ನಾಗಿದೆಯಾ ಎಂದು ವಿಚಾರಿಸುತ್ತಾ ,ನಿಮ್ಮ ಜೊತೆ  ಬಂದಿರುವ ಪಂಡಿತರು  ಬಹು ದೊಡ್ಡ ವಿದ್ವಾಂಸರೆಂದು ಸುತ್ತಮುತ್ತ ಹಳ್ಳಿಯವರು ಹೇಳುವುದನ್ನು ಕೇಳಿದ್ದೇನೆ  ನನಗೆ ತುಂಬಾ ಸಂತೋಷವಾಯಿತು ಎಂದನ

ದಿನಕ್ಕೊಂದು ಕಥೆ 1102

*🌻ದಿನಕ್ಕೊಂದು ಕಥೆ🌻* *ಆತ್ಮ ಜ್ಞಾನದ ಅನುಭೂತಿ* ಇದೊಂದು ಜೈನ ಶಾಸ್ತ್ರದಲ್ಲಿನ ಪ್ರಾಚೀನ ಕಥೆ.   ಮಿಥಿಲಾದ ಮಹಾರಾಜ ನೇಮಿಯು ಯಾವತ್ತೂ  ಯಾವ ಶಾಸ್ತ್ರಗಳನ್ನು ಓದಲಿಲ್ಲ. ಎಂದೂ ಅವನಲ್ಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರಲಿಲ್ಲ. ಅದೊಂದು ಕೊರತೆಯೆಂದು ಕೂಡ ಅವನಿಗೆ ಅನಿಸಿರಲೇ ಇಲ್ಲ.    ಅವನು ಸ್ವಲ್ಪ  ಮಧ್ಯವಯಸ್ಕನಾಗುತ್ತಾ ‌ಬಂದ. ಒಂದು ಸಲ ಅವನಿಗೆ ಜೋರಾಗಿ ಜ್ವರ ಬಂತು. ಭಯಂಕರ ಜ್ವರದ ಯಾತನೆಯಲ್ಲಿ ನರಳುತ್ತಾ ಮಲಗಿದ್ದನು. ಅವನ ರಾಣಿಯರು  ಜ್ವರದ ತಾಪದಿಂದ ಅವನ ಶರೀರವನ್ನು ತಂಪಾಗಿಸಲಿಕ್ಕಾಗಿ, ಗಂಧ ಮತ್ತು ಕೇಸರಿಯ ಲೇಪ ಮಾಡ ತೊಡಗಿದರು. ರಾಣಿಯರ ಕೈಯಲ್ಲಿ ಬಂಗಾರದ ಬಳೆಗಳಿದ್ದವು. ಬಳೆಗಳಲ್ಲಿ ಮುತ್ತು ರತ್ನಗಳನ್ನು ಅಂಟಿಸಲಾಗಿತ್ತು. ಇವನಿಗೆ ಗಂಧ  ಲೇಪನ ಮಾಡುವ ಸಮಯದಲ್ಲಿ ಅವರ ಬಳೆಗಳು ಬಹಳವಾಗಿ ಸದ್ದು ಮಾಡುತ್ತಿದ್ದವು. ರಾಜನಿಗೆ ಆ ಬಳೆಗಳ ಸದ್ದಿನಿಂದ ವಿಪರೀತ ಕಿರಿ ಕಿರಿ ಯಾಗುತ್ತಿತ್ತು. ತೆಗೆದುಹಾಕಿ ಈ ಬಳೆಗಳನ್ನು, ನನಗೆ ಇವುಗಳ ಶಬ್ದವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಿರುಚಿದ.      ‌ ಆ  ರಾಣಿಯರು, ಮಂಗಳಸೂತ್ರದ ಕಲ್ಪನೆಯಿಂದ ಬಳೆಯಿಲ್ಲದೆ ಬರೀ ಕೈನಲ್ಲಿ ಇರಬಾರದು ಎಂದುಕೊಂಡು, ಕೈನಲ್ಲಿ ಒಂದೊಂದು ಬಳೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ತೆಗೆದು ಇಟ್ಟರು. ಬಳೆಯ ಸದ್ದೇನೊ ನಿಂತಿತು,  ಶ್ರೀಗಂಧದ ಲೇಪನ ನಡೆಯುತ್ತಿತ್ತು.   ‌ ಈ ಸಮಯದಲ್ಲಿ ನೇಮಿರಾಜನ ಒಳಗೆ ಒಂದು ಮಹಾ ಕ್ರಾಂತಿ ಘಟಿಸಿಬಿಟ್ಟಿತು. ಹತ್ತು ಬಳೆಗ

ದಿನಕ್ಕೊಂದು ಕಥೆ 1101

*🌻ದಿನಕ್ಕೊಂದು ಕಥೆ🌻*    *ಆಕಸ್ಮಿಕ* "ಅಮ್ಮಾ, ನಿಂದೆಲ್ಲಾ ಸಾಮಾನು ಪ್ಯಾಕ್ ಆಯ್ತಾ? ಲಗೂ ನಡಿ, ಮತ್ತ ಗಾಡಿ ತಪ್ಪಿದ್ರ ಸಮಸ್ಯೆ ಆಗ್ತದ" ಮಗ ರಾಜುನ ಧ್ವನಿ ಕೇಳಿ ಚೀಲದೊಂದಿಗೆ ಹೊರ ಬಂದ ಅಂಬುಜಮ್ಮ, " ನಾ ತಯಾರಾಗಿ ಭಾಳ ಹೊತ್ತಾತು. ನೀನೇ ಲಗೂ ಬರಲಿಲ್ಲ ನೋಡು". ಅಮ್ಮನ ಮಾತು ಕೇಳಿದ ಮಗ ,"ಆತು ನಡಿ ನಡಿ, ಆಟೋ ತಂದೀನಿ, ಹೋಗೂಣಂತ" ಅಂದ. ರಾಜು ತನ್ನ ಮತ್ತ ತನ್ನಮ್ಮನ ಚೀಲವನ್ನು ಹೊರಗಿಟ್ಟು ಮನೆ ಬಾಗಿಲು ಹಾಕಿ ಕೀಲಿ ಹಾಕಿ ಅಮ್ಮನ ಜೊತೆ ಆಟೋ ಹತ್ತಿದ. ಇನ್ನೂ ಐದು ನಿಮಿಷ ಇರುವಾಗಲೇ ರೈಲು ನಿಲ್ದಾಣಕ್ಕೆ ಬಂದ ಅಮ್ಮ ಮಗ ಅಲ್ಲೇ ಒಂದು ಜಾಗ ಹಿಡಿದು ಗಾಡಿಯ ಹಾದಿ ಕಾಯುತ್ತಾ ಕೂತರು. ಬೆವರು ಒರೆಸುತ್ತ ಅಂಬುಜಮ್ಮ ಮಗನ ಕಡೆ ಹೆಮ್ಮೆಯಿಂದ ನೋಡಿದರು. ತನ್ನ ಎಷ್ಟೋ ದಿನಗಳ ಕನಸು ನನಸು ಮಾಡಲು ಮಗ ತನ್ನನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ನಾನು ಎಷ್ಟು ಪುಣ್ಯವಂತಳು ಎಂದುಕೊಂಡು ಇಂಥಾ ಮುತ್ತಿನಂಥಾ ಮಗನನ್ನು ಕೊಟ್ಟ ದೇವರಿಗೆ ಮನದಲ್ಲೇ ಕೈ ಮುಗಿದರು. ಅಮ್ಮ ಮಗ ಇಬ್ಬರೂ ಪವಿತ್ರವಾದ ಕಾಶಿ ಕ್ಷೇತ್ರಕ್ಕೆ ಬಂದಿಳಿದರು. ಮೊದಲು ಛತ್ರಕ್ಕೆ ಹೋಗಿ ಕೈ ಕಾಲು ತೊಳೆದು ಗಂಗಾಸ್ನಾನಕ್ಕಾಗಿ ನದಿಗೆ ಬಂದರು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬಂದರು. ಕಾಶಿಯಲ್ಲಿ ಇಳಿದಾಗಿನಿಂದ ತಾಯಿ ಮಗನ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಮಗನ ವಿಚಾರ ಲಹರಿಯೇ ಬೇರೆಯಾಗಿತ್ತು

ದಿನಕ್ಕೊಂದು ಕಥೆ 1110

*🌻ದಿನಕ್ಕೊಂದು ಕಥೆ🌻* *" ಸಹಾಯ"*   ನಿರ್ಮಲಾ , ಚಪಾತಿ ಹಿಟ್ಟು ಕಲೆಸಿ ಸಣ್ಣ ಪುಟ್ಟ ಕೆಲಸ ಪೂರೈಸಿದವಳು ಚಪಾತಿ ಮಾಡಲು ಗ್ಯಾಸ್ ಒಲೆ ಮೇಲೆ ತವಾ ಇಡಲು ಮುಂದಾದಾಗ, ಬಾಗಿಲಿನ ಬೆಲ್ ಶಬ್ದ ಆಗುತ್ತದೆ. ಗ್ಯಾಸ್ ಆಫ್ ಮಾಡಿ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದು ಬಾಗಿಲು ತೆರೆದು ನೋಡಿದಾಗ ಮೆಟ್ಟಿಲಿನ ಕೆಳಗೆ ಸುಮಾರು ಐವತ್ತು ವರ್ಷ ವಯಸ್ಸಿನ ನೋಡಲು ಹಳ್ಳಿಯವನಂತಿದ್ದ ವ್ಯಕ್ತಿ ತನ್ನ ಹದಿನಾರು ವರ್ಷ ದ ಮಗಳೊಂದಿಗೆ ನಿಂತಿರುತ್ತಾನೆ. ನಿರ್ಮಲಾ ಅವನನ್ನು ಭಿಕ್ಷುಕ ಎಂದು ತಿಳಿದವಳು " ಚಿಲ್ಲರೆ ಹಣ ಈಗ ಇಲ್ಲ ಮುಂದೆ ಹೋಗಪ್ಪಾ" ಎಂದಾಗ ಆತ ವ್ಯಕ್ತಿ " ಮೇಡಂ.. ನನಗೆ ಚಿಲ್ಲರೆ ಹಣ ಬೇಡಾ ಐವತ್ತು ಸಾವಿರ ರೂಪಾಯಿ ಬೇಕಾಗಿವೆ" ಎನ್ನುತ್ತಾನೆ.ಆಶ್ಚರ್ಯ ಮತ್ತು ವಿಚಿತ್ರ ದೃಷ್ಟಿಯಿಂದ ಆತನನ್ನು ನೋಡುತ್ತ -" ಎಲ್ಲಿಯವನಪ್ಪಾ ನೀನು.. ಏನು ಕೇಳ್ತಿದ್ದಿ ಅಂತ ಅದಾರೂ ಗೊತ್ತಾ? ಎಂದು ಪ್ರಶ್ನಿಸಿದಾಗ ಆತ ವಿನೀತನಾಗಿ " ಮೇಡಂ.. ನಾನು ಹುಬ್ಬಳ್ಳಿಯ ಹತ್ತಿರ ಇರುವ ಒಂದು ಹಳ್ಳಿಯಲ್ಲಿ ಇರುವವ. ನನಗೆ ನೀವು ಯಾರೆಂದು ಗೊತ್ತಿಲ್ಲ, ಏಕೆಂದರೆ ನಾನು ಇದೇ ಮೊದಲನೇ ಬಾರಿ ಮೈಸೂರಿಗೆ ಬರ್ತಾ ಇದ್ದೇನೆ " ಎನ್ನುತ್ತಾನೆ. ಮುಂದುವರೆದ ನಿರ್ಮಲಾ" ಇಷ್ಟೊಂದು ಹಣ..! ನನ್ನ ಬಳಿ ಇಲ್ಲಾ.. ಮುಂದೆ ಎಲ್ಲಾದರೂ ಹೋಗಿ ಪ್ರಯತ್ನ ಮಾಡು " ಎನ್ನುತ್ತಾಳೆ. ಅಷ್ಟಕ್ಕೇ ಸುಮ್ಮನಿರದ ಆ ವ್ಯಕ್ತಿ -" ಮೇಡಂ.

ದಿನಕ್ಕೊಂದು ಕಥೆ 1099

*🌻ದಿನಕ್ಕೊಂದು ಕಥೆ🌻*     *ಮೌನದ ಶಕ್ತಿ* ಒಬ್ಬ ರೈತ, ತನ್ನ ಮನೆಯ ಉಗ್ರಾಣವನ್ನು ಶುಚಿಗೊಳಿಸಿ, ದವಸ ಧಾನ್ಯ, ಬೇಳೆ ಕಾಳು ಸಾಮಾನು- ಸರಂಜಾಮುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ ಮಾಡುತ್ತಿದ್ದನು. ಶುಚಿ ಗೊಳಿಸುವಾಗ ಅದು ಹೇಗೋ ಅವನ ಕೈಯಲ್ಲಿದ್ದ ವಾಚು ಬಿದ್ದು ಹೋಯಿತು. ರೈತ ಚಿಕ್ಕವನಿರುವಾಗ ಅವನ ತಂದೆ ಪ್ರೀತಿಯಿಂದ ತೆಗೆದು ಕೊಟ್ಟ ವಾಚು. ರೈತನಿಗೆ ಅದರ ಮೇಲೆ ಬಹಳ ಅಭಿಮಾನ. ಕೆಲಸ ಬಿಟ್ಟು ಹುಡುಕ ತೊಡಗಿದ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಅವನಿಗೆ ಕೆಲಸ ಮಾಡಿದ ಆಯಾಸ, ವಾಚು ಕಳೆದು ಹೋದ ಬೇಸರ ಆಗಿತ್ತು. ಕೆಲಸ ಮುಂದುವರಿಸಲಾಗದೆ ಉಗ್ರಾಣ ಬಿಟ್ಟು ಹೊರಗೆ ಬರುತ್ತಾನೆ. ಮನೆಯ ಮುಂದಿನ ಅಂಗಳದಲ್ಲಿ ನಾಲ್ಕಾರು ಮಕ್ಕಳು ಸೇರಿಕೊಂಡು ಬುಗುರಿ ಆಡುತ್ತಿದ್ದರು. ಯೋಚಿಸಿದ ರೈತ, ಆ ಮಕ್ಕಳನ್ನು ಕರೆದು, ನೋಡಿ ಮಕ್ಕಳೇ ಉಗ್ರಾಣದಲ್ಲಿ ಕೆಲಸ ಮಾಡುವಾಗ ನನ್ನ ಕೈ ಗಡಿಯಾರ ಬಿದ್ದು ಕಳೆದು ಹೋಗಿದೆ. ನಾನು ಹುಡುಕಿದೆ ಸಿಗಲಿಲ್ಲ. ನೀವೆಲ್ಲ ಸೇರಿ ಹುಡುಕಿಕೊಟ್ಟರೆ ನಿಮಗೆ ಒಳ್ಳೆಯ ಬಹುಮಾನ ಕೊಡುವೆ ಎಂದನು. ಮಕ್ಕಳು ಬಹುಮಾನದಾಸೆಗೆ ಉಗ್ರಾಣದೊಳಗೆ ಹೋಗಿ ಎಲ್ಲಾ ಕಡೆ ಜಾಲಾಡಿ ಹುಡುಕಿದವು. ಯಾರಿಗೂ ವಾಚು ಸಿಗಲಿಲ್ಲ. ಮಕ್ಕಳಿಗೂ ಆಯಾಸವಾಗಿತ್ತು. ಸಂಜೆಯಾಗುತ್ತಿತ್ತು. ಮಕ್ಕಳು ಮನೆಗೆ ಹೊರಟವು. ಇನ್ನು ತನ್ನ ವಾಚು ಸಿಗುವುದಿಲ್ಲ ಎಂದು ರೈತ ಉಗ್ರಾಣದ ಬಾಗಿಲು ಹಾಕಲು ಹೊರಟಿದ್ದನು.‌ ಅಲ್ಲೇ ನಿಂತಿದ್ದ ಒಬ್ಬ ಬಾಲಕ, ಅಣ್ಣ ನನಗೆ ಇನ್ನೊಮ್ಮೆ ಗ

ದಿನಕ್ಕೊಂದು ಕಥೆ 1098

*🌻ದಿನಕ್ಕೊಂದು ಕಥೆ🌻* *ಕಲಿತ  ಯಾವುದೇ ವಿದ್ಯೆಯೂ ಎಂದೂ ಅಪ್ರಯೋಜಕ ವಲ್ಲಾ.*  ತರುಣನೊಬ್ಬ ಅಧ್ಯಾಪಕ ವೃತ್ತಿಗೆ ಹೊಸದಾಗಿ ಸೇರಿದ್ದ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವ ಪಾಠದ ಜೊತೆಗೆ ಬೇರೆ ಏನನ್ನಾದರೂ ಕಲಿಸಬೇಕೆನ್ನುವ ಹಂಬಲ ಅವನಿಗೆ. ಅವನ ಜೊತೆಯಲ್ಲಿರುವ ಅಧ್ಯಾಪಕರಿಗೆ, ತಮಗೆ ಕೊಟ್ಟ ಕೆಲಸ  ತಾವು ಮಾಡಿಕೊಂಡು ಹೋದರೆ ಸಾಕು , ಪಠ್ಯಪುಸ್ತಕದಲ್ಲಿ, ಇಲ್ಲದೇ ಇರುವುದನ್ನೆಲ್ಲ ಏಕೆ ಅಂಟಿಸಿಕೊಳ್ಳಬೇಕು ಎನ್ನುವ ಮನೋಭಾವ ಅವರದ್ದು.‌ಅವರು ಕೊಡುವ ಸಂಬಳಕ್ಕೆ  ಎಷ್ಟು ಮಾಡಬೇಕೊ ಅಷ್ಟು ಮಾಡಿದರೆ ಸಾಕು  , ಇಲ್ಲದೆ ಇರುವುದನ್ನು ಏಕೆ ಅಂಟಿಸಿಕೊಳ್ಳುತ್ತಿಯಾ ಎಂದು ಯುವ ಅಧ್ಯಾಪಕನಿಗೆ ಎಲ್ಲರೂ  ಬುದ್ಧಿ ಹೇಳುತ್ತಿದ್ದರು.     ಆದರೂ ,ಈ ಹೊಸ ಅಧ್ಯಾಪಕ, ಪಠ್ಯ ಪುಸ್ತಕದಲ್ಲಿರುವ ಪಾಠದ‌ ಜೊತೆಗೆ  ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕ ಹಾಗೆ ಏನನ್ನಾದರೂ ಹೇಳಿಕೊಟ್ಟು ಅವರ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸುತ್ತಿದ್ದ. ನಿಧಾನವಾಗಿ ಈ ಅಧ್ಯಾಪಕ ,ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚಿನವನಾದ. ಪಠ್ಯಪುಸ್ತಕದಲ್ಲಿರುವ ಬೇಸರ ಬರುವಂತ ಸಂಗತಿಗಳಿಗಿಂತ, ತಮ್ಮೊಳಗಿರುವ ಉತ್ಸಾಹಕ್ಕೆ ನೀರೆರೆಯುವ ಮೇಷ್ಟ್ರು, ಅವರಿಗೆ ಬಹಳ ಪ್ರಿಯವಾಗಿ ಕಾಣತೊಡಗಿದರು.ಎಲ್ಲಾ ಮಕ್ಕಳ ಬಾಯಲ್ಲೂ ಯವ‌ ಅಧ್ಯಾಪಕರ ಹೆಸರೇ.    ಈ ಅಧ್ಯಾಪಕರು ಗಿಡಮರಗಳನ್ನು ತೋರಿಸಿ, ‌ಅವುಗಳ  ಉಪಯೋಗದ‌ ಬಗ್ಗೆ ವಿವರಣೆ ‌ನೀಡಿ , ಪಶು ಪಕ್ಷಿಗಳನ್ನು ತೋರಿಸಿ,ಅವುಗಳ‌ ಚಲನ‌ವಲನ

ದಿನಕ್ಕೊಂದು ಕಥೆ 1097

*🌻ದಿನಕ್ಕೊಂದು ಕಥೆ🌻* *ಭಗವಂತನೇ ಕೊಟ್ಟ ಪಾಲು. ಸುಖ-ದುಃಖವೇಕೆ ?* ಅಯ್ಯಂಗಾರ್  ಬೇಕರಿಯಲ್ಲಿ , ನಾಲ್ಕಾರು ವರ್ಷಗಳಿಂದ ‘ಸುಬ್ಬು’ ಎಂಬ ಹುಡುಗ ಕೆಲಸ ಮಾಡುತ್ತಿದ್ದ. ನಂಬಿ ಕಸ್ತನಾಗಿದ್ದ. ಮಾಲೀಕರು ಕೊಡುವ ರಜೆಯ ಹೊರತು ತನಗಾಗಿ ಒಂದು ದಿನವೂ  ರಜಾ ತಗೊಂಡಿಲ್ಲ. ಒಳ್ಳೆಯ ನಿಯತ್ತಿನ ಹುಡುಗ (ಯುವಕ), ಮಾತು ಕಡಿಮೆ, ಅಚ್ಚುಕಟ್ಟಾದ  ಕೆಲಸ. ಅದೊಂದು ದಿನ ಇದ್ದಕ್ಕಿದ್ದಂತೆ, ಹೇಳದೆ ಕೇಳದೆ ರಜಾ ಹಾಕಿ ಅಂಗಡಿ ಕೆಲಸಕ್ಕೆ ಬರಲಿಲ್ಲ. ಅಯ್ಯಂಗಾರ್ ಯೋಚಿಸಿದರು ಈ ಹುಡುಗ ಒಂದು ದಿನವೂ ರಜೆ ಹಾಕಿಲ್ಲ ಯಾರಾದರೂ ಜಾಸ್ತಿ ಸಂಬಳ ಕೊಡುತ್ತೇವೆ ಎಂದು ಸೆಳೆದುಕೊಂಡರೋ ಏನೋ, ಅಥವಾ ಸಂಬಳ ಜಾಸ್ತಿ ಮಾಡಿಲ್ಲವೆಂಬ ಕೋಪವೋ ? ತರ್ಕಿಸಲಾಗದೆ, ಏನೇ ಆಗಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಇಷ್ಟು ಒಳ್ಳೆಯವರು ನಮಗೆ ಸಿಗುವುದಿಲ್ಲ. ನಾನೇ ಅವನಿಗೆ ಸಂಬಳ ಹೆಚ್ಚಿಸಿ ನಾಳೆ ಬಂದಾಗ ಹೇಳುತ್ತೇನೆ. ಆಗ ಅವನು  ಖುಷಿಯಾಗಿ ಹೇಳದೆ ಕೇಳದೆ ರಜಾ ತಗೊಳುವುದಿಲ್ಲ ಎಂದುಕೊಂಡರು.  ಎಂದಿನಂತೆ ಮರುದಿನ ಸುಬ್ಬು ಕೆಲಸಕ್ಕೆ ಬಂದ, ಮಾಲೀಕರು ಕರೆದು ನೋಡು ನಿನ್ನ ಸಂಬಳ ಹೆಚ್ಚಿಗೆ ಮಾಡಿದ್ದೇನೆ ಎಂದರು.  ಅವನು ಯಾವ  ಪ್ರತಿಕ್ರಿಯೆ ನೀಡದೆ ಸುಮ್ಮನೆ ನಕ್ಕು, ತಲೆ ಅಲ್ಲಾಡಿಸಿ ತನ್ನ ಕೆಲಸದಲ್ಲಿ ತೊಡಗಿಕೊಂಡ. ಈ ಹುಡುಗ ಕೃತಜ್ಞತೆಯನ್ನು ಹೇಳಲಿಲ್ಲ ಎಂದು ಅಯ್ಯಂಗಾರ್ ಅಂದುಕೊಂಡರು.ನಾಲ್ಕರು ತಿಂಗಳ ಕಳೆಯಿತು. ಹಿಂದಿನಂತೆಯೇ ಆತ ಹೇಳದೆ ಕೇಳದೆ, ಮತ್ತೊಂದು ರಜಾ ಹಾಕಿದ. ಈ ಸಲ

ದಿನಕ್ಕೊಂದು ಕಥೆ 1096

*🌻ದಿನಕ್ಕೊಂದು ಕಥೆ🌻*    *ಜೀವನ್ಮುಖಿ* ಒಂದು ಪಟ್ಟಣದಲ್ಲಿ,  ಬೇರೆ, ಬೇರೆ  ಹುದ್ದೆಯಲ್ಲಿದ್ದು ನಿವೃತ್ತರಾದ, ಹಿರಿಯರೆಲ್ಲಾ ಸೇರಿಕೊಂಡು ಒಂದು ಸಂಘವನ್ನು ಮಾಡಿಕೊಂಡಿದ್ದರು. ಇವರ ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಪಾಡಿಗೆ ಅವರವರ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಹಾಗಾಗಿ ಈ ಹಿರಿಯರಿಗೆಲ್ಲಾ ತಮ್ಮ ಮಕ್ಕಳ ಜವಾಬ್ದಾರಿ ಅಷ್ಟಾಗಿ ಇರಲಿಲ್ಲ. ಇವರುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದ್ದುದರಿಂದ , ಸುಮ್ಮನೆ ಏನೂ ಕೆಲಸವಿಲ್ಲದೆ ಕೂರುವುದರ ಬದಲು , ಸಮಾಜಕ್ಕೆ ಏನಾದರೂ ಸಹಾಯ ಮಾಡಿ  ,ತಾವೂ ಕೂಡ ಚಟುವಟಿಕೆಯಿಂದ ಇರಬಹುದು ಎಂದುಕೊಂಡು, ಇವರೆಲ್ಲ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದರು.    ಸಂಘಕ್ಕೆ ಒಂದು ಸ್ಥಳವನ್ನು ಗೊತ್ತು ಮಾಡಿಕೊಂಡಿದ್ದರು. ಪ್ರತಿದಿನ ಸಾಯಂಕಾಲ ಎಲ್ಲರೂ ಅಲ್ಲಿ ಸೇರಿ ಏನಾದರೂ ಚಿಂತನೆ ಮಾಡುತ್ತಿದ್ದರು. ಶಿಕ್ಷಕರಾಗಿ ನಿವೃತ್ತರಾದವರು, ಹತ್ತಿರದ ಕೊಳಗೇರಿಯಲ್ಲಿರುವ ಮಕ್ಕಳಿಗೆ ಆಗಾಗ ಪಾಠ ಹೇಳಿ ಕೊಡುವರು. ಇನ್ನೂ ಕೆಲವರು ಮನೆ,ಮನೆಗಳಿಗೆ ಹೋಗಿ, ನೈರ್ಮಲ್ಯದ ಬಗ್ಗೆ, ಮಾತನಾಡುತ್ತಾ  ಮನೆ ಮುಂದೆ ಕೊಳಕು ಹಾಕದಿರುವಂತೆ, ತಿಳುವಳಿಕೆ ನೀಡುತ್ತಿದ್ದರು. ಮತ್ತೆ ಕೆಲವರು ಯಾರಿಗಾದರೂ ಕಾಯಿದೆ,‌ ಕಾನೂನಿನ ವಿಷಯದಲ್ಲಿ, ಭೂ ವಿಚಾರದಲ್ಲಿ ಏನಾದರೂ ಮಾಹಿತಿ ಬೇಕಿದ್ದರೆ ಉಚಿತವಾಗಿ ಸಲಹೆ ನೀಡುತ್ತಿದ್ದರು. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಮಾಡಿಸಿ ಅವರನ್ನು ಸ್ವಾವಲಂಬಿಯಾಗುವಂತೆ ಮಾಡುತ್ತಿದ್ದರು. ಹೀಗೆ ಸಮಾಜದಲ್ಲಿ ಯಾವ

ದಿನಕ್ಕೊಂದು ಕಥೆ 1095

*🌻ದಿನಕ್ಕೊಂದು ಕಥೆ🌻*    *ಕೈ ತುತ್ತು* ಹಿಂದಿನ ವರ್ಷ ಗಂಡನು ತೀರಿಹೋದಾಗ, ನೆರೆಯವರು, ನೆಂಟರಿಷ್ಟರು ಯಾರೂ ಅಷ್ಟಾಗಿ ಸಹಾಯ ಮಾಡದೆ, ವಯಸ್ಸಾದ ತಾವೊಬ್ಬರೇ ಒದ್ದಾಡಿದ್ದು, ಮನದಲ್ಲಿ ಇನ್ನೂ ಅಚ್ಚಳಿಯದೆ ಹಾಗೇ ಉಳಿದಿತ್ತು. ಬೇರೆ ದೇಶದಲ್ಲಿದ್ದ ಸ್ವಂತ ಮಕ್ಕಳು ಕೂಡ, ಅಂತ್ಯಕ್ರಿಯೆಗೆ ಅಂತ ಅಲ್ಲಿಂದಲೇ ದುಡ್ಡು ಕಳಿಸಿ ಕೈತೊಳೆದುಕೊಂಡಿದ್ದರು. ಅದರಿಂದಲೇ ನಾಳೆ ಮಾಡಬೇಕಾದ ವರ್ಷದ ತಿಥಿಗೆ, ಅವರ್ಯಾರನ್ನು ಕರೆಯದೆ, ಶಾಲೆಯ ಒಂದಷ್ಟು ಮಕ್ಕಳಿಗೆ ಸರಳವಾಗಿ ಊಟ ಹಾಕುವುದಂತ ನಿರ್ಧರಿಸಿ, ಒಂದೈದು ಬುದ್ದಿವಂತ ಮಕ್ಕಳನ್ನು ಕಳಿಸಿಕೊಡಲು ಮೇಷ್ಟ್ರಿಗೆ ಹೇಳಿದ್ದರು. ಅವರ ಆರ್ಥಿಕ ಪರಿಸ್ಥಿತಿಯೂ ಈ ನಿರ್ಧಾರಕ್ಕೆ ಕಾರಣವಾಗಿತ್ತು.  ಬೆಳಗ್ಗೆಯೇ ಎದ್ದು ಯಜಮಾನರ ಫೋಟೋಗೆ ಪೂಜೆ ಮಾಡಿ, ಏಳೆಂಟು ಜನರಿಗೆ ಆಗುವಷ್ಟು ಅಡಿಗೆ ಮಾಡಿಟ್ಟು, ಮಕ್ಕಳಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಒಂದರ ಹೊತ್ತಿಗೆ, ".......ಊಟದ ಆಟ ಮುಗಿದಿತ್ತು" ಅಂತ ಹಾಡು ಹೇಳುತ್ತಾ, ಸಾಲಾಗಿ ಹದಿನೈದು-ಇಪ್ಪತ್ತು ಮಕ್ಕಳ ಗುಂಪೇ ಮನೆಗೆ ಬಂದಿದ್ದು ಕಂಡು ಅವರು ದಂಗಾಗಿ ಹೋದರು.  "ಹೇಗಪ್ಪಾ!! ಇಷ್ಟು ಮಕ್ಕಳಿಗೆ ಊಟ ಹಾಕೋದು, ಮೇಷ್ಟ್ರಿಗೆ ನಾನು ಹೇಳಿದ್ದು ಐದು ಜನ ಮಾತ್ರ, ಅವರೇನಾದರೋ ತಪ್ಪು ತಿಳಿದರೇ!!" ಅಂತ ಪೇಚಾಡುತ್ತಿರುವಾಗಲೇ ಮೇಷ್ಟು ಬಂದಿದ್ದು ಕಂಡಿತು. ಆಕೆಯ ಮುಖದ ಮೇಲೆ ಎದ್ದು ಕಾಣುತ್ತಿದ್ದ ಅವರ ಗೊಂದಲ ಅರ್ಥೈಸಿಕೊಂಡ ಮೇಷ್ಟ್ರು "ಅಮ್ಮಾ!

ದಿನಕ್ಕೊಂದು ಕಥೆ 1094

*🌻ದಿನಕ್ಕೊಂದು ಕಥೆ🌻* ಅದೊಂದು ಶಾಲೆ. ತುಸು ದೂರದಲ್ಲಿ ಒಂದು ಮನೆ. ಆ ಮನೆಯಲ್ಲಿ ಒಬ್ಬ ಮುದುಕ ವಾಸಿಸುತ್ತಿದ್ದಾನೆ. ಶಾಲೆಯಲ್ಲಿ ಮಕ್ಕಳು ವಸ್ತು ಪ್ರದರ್ಶನ ಏರ್ಪಡಿಸಿದ್ದಾರೆ. ಜನರು  ಪ್ರದರ್ಶನ ನೋಡಿ ಹೋಗುತ್ತಿದ್ದಾರೆ. ಹುಡುಗನೊಬ್ಬ ಟಾರ್ಚ್ ಸೆಲ್ಲಿಗೆ ಮತ್ತು ಬಲ್ಬಿಗೆ ಒಂದು ತಂತಿಯನ್ನು ಜೋಡಿಸಿದ್ದಾನೆ. ಜನರಿಗೆ ತಿಳಿಸುತ್ತಾನೆ, ನೋಡಿ ಸೆಲ್ಲನಿಂದ ಕರೆಂಟ್ ಹರಿದು ಬಲ್ಬ್ ಉರಿಯುತ್ತಿದೆ ಎಂದು. ಜನರು ಹುಡುಗನ ಜಾಣ್ಮೆಗೆ ತಲೆದೂಗುತ್ತಾರೆ. ಶಾಲೆಯ ಬಳಿಯಲ್ಲಿರುವ ಮುದುಕ ಪ್ರದರ್ಶನ ನೋಡಲು ಬರುತ್ತಾನೆ. ಹುಡುಗ ಅವನಿಗೂ ಕರೆಂಟ್ ಬಗ್ಗೆ ಹೇಳುತ್ತಾನೆ. ಮುದುಕ ಕೇಳುತ್ತಾನೆ ಮಗುವೇ ನೀನು ಕರೆಂಟ್ ನೋಡಿದ್ದೀಯಾ ಎಂದು? ಹುಡುಗನಿಗೆ ಗೊತ್ತಿಲ್ಲ. ಮುದುಕ ಹೊರಟು ಹೋಗುತ್ತಾನೆ. ಹುಡುಗ ಶಿಕ್ಷಕರ ಬಳಿ ಬಂದು ನಡೆದುದನ್ನು ಹೇಳುತ್ತಾನೆ. ಶಿಕ್ಷಕರಿಗೂ ಉತ್ತರ ಗೊತ್ತಿಲ್ಲ. ಇಬ್ಬರೂ ಪ್ರಿನ್ಸಿಪಾಲರ ಬಳಿ ವಿಷಯವನ್ನು ತಿಳಿಸುತ್ತಾರೆ. ಪ್ರಿನ್ಸಿಪಾಲರಿಗೂ ಉತ್ತರ ಗೊತ್ತಿಲ್ಲ. ಮೂವರೂ ಮುದುಕನ ಬಳಿ ಬರುತ್ತಾರೆ. ಪ್ರಿನ್ಸಿಪಾಲರು ಮುದುಕನಿಗೆ ನೀನು ಕರೆಂಟ್ ನೋಡಿದ್ದೀಯಾ ಎಂದು ಕೇಳುತ್ತಾರೆ. ಮುದುಕ ಇಲ್ಲ ಎನ್ನುತ್ತಾನೆ. ಹಾಗಾದರೆ ನಮ್ಮ ಹುಡುಗನಿಗೆ ಯಾಕೆ ನಿನಗೇ ಗೊತ್ತಿಲ್ಲದ ಪ್ರಶ್ನೆಯನ್ನ ಕೇಳಿದೆ ಎಂದು ಕೋಪಿಸುತ್ತಾರೆ. ಮುದುಕ ಹೇಳುತ್ತಾನೆ. ಕರೆಂಟ್ ಅನ್ನು ಯಾರೂ ನೋಡಲು ಸಾಧ್ಯವಿಲ್ಲ. ಉಪಯೋಗಿಸಬಹುದು. ಈ ಉತ್ತರವನ್ನು ನಾನು ಹುಡುಗನಿಂದ ನಿರೀ

ದಿನಕ್ಕೊಂದು ಕಥೆ 1093

*🌻ದಿನಕ್ಕೊಂದು ಕಥೆ🌻* *ಬೇರೆಯವರ ಬಗ್ಗೆ  ಹಬ್ಬಿಸುವ ಗಾಳಿಸುದ್ದಿಗಳು.* ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ. ಯಾವಾಗಲೂ ಇದೇ ಅವನ ಕೆಲಸ.    ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ  ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು  ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು . ವಿಚಾರಣೆಯೆಲ್ಲಾ ನೆಡೆದು,ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.     ಅವಮಾನಿತನಾದ ‌ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ.      ನ್ಯಾಯಾಲಯದಲ್ಲಿ  ಈ  ವ್ಯಕ್ತಿ, ನಾನು ಸುಮ್ಮನೆ ಅವನು ‌ಇದ್ರೂ ಇರಬಹುದು ‌ಎಂದು‌‌ ಅನುಮಾನದಿಂದ ಹೇಳಿದ್ದು, ಅದರಿಂದ ಈಗ  ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ. ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ  ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ  ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ

ದಿನಕ್ಕೊಂದು ಕಥೆ 1092

*🌻ದಿನಕ್ಕೊಂದು ಕಥೆ🌻* *ಇರುವೆ ಕಲಿಸಿದ ಪಾಠ* ಅವರು ಹೆಸರಾಂತ ಕಾಲೇಜಿನ ಬುದ್ಧಿವಂತ ಪ್ರೊಫೆಸರ್, ಅವರಿಗೆ ಬಿಡಿಸಲಾಗದ ಒಂದು ಸಮಸ್ಯೆ ಎದುರಾಯಿತು. ಚೆನ್ನಾಗಿ ಓದುತ್ತಿದ್ದ ಅವರ ಮಗ, ವಿದ್ಯಾಭ್ಯಾಸ ದ ಮುಖ್ಯ ಹಂತಕ್ಕೆ ಬಂದಾಗ, ದಾಟದೆ ಅಲ್ಲಿ ಫೇಲ್ ಆಗಿಬಿಟ್ಟ. ಇದರಿಂದ ಆ ಹುಡುಗ ಬೇಸರಗೊಂಡು ಓದುವುದನ್ನು ನಿಲ್ಲಿಸುತ್ತಾನೆ. ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಆತ ಏನನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಉತ್ಸಾಹ, ಧೈರ್ಯ ಕಳೆದುಕೊಂಡು, ಓದನ್ನು ನಿಲ್ಲಿಸಿ ಏನು ಮಾಡದೆ ಕೂತುಬಿಟ್ಟ. ಬೆಳೆಯುವ ವಯಸ್ಸು ಬೆಳೆದು ಯುವಕನಾಗುತ್ತಿದ್ದಾನೆ. ಎಲ್ಲಿ ಭವಿಷ್ಯವನ್ನೇ ಹಾಳು ಮಾಡಿ ಕೊಳ್ಳುವನೋ ಎಂದು ತಂದೆಗೆ ಭಯವಾಗಿ, ಕೊನೆಗೆ ಒಬ್ಬ ಗುರುಗಳ ಬಳಿ ಮಗನನ್ನು ಕರೆದುಕೊಂಡು ಬಂದು ತಮ್ಮ ಸಮಸ್ಯೆಯನ್ನು ಹೇಳಿ ಕೊಂಡರು. ಗುರುಗಳು ಆ ಬಾಲಕನನ್ನು ಏಳು ದಿನ ತಮ್ಮ ಬಳಿಗೆ ಕಳಿಸುವಂತೆ  ಹೇಳಿದರು. ಅದೇ ರೀತಿ ಮರುದಿನ ಹುಡುಗ ಗುರುಗಳ ಬಳಿ ಬಂದನು. ಗುರುಗಳು ಆತನಿಗೆ ದೂರದ ಬೆಟ್ಟದ ಮೇಲಿರುವ ಒಂದು ದೇವಸ್ಥಾನವನ್ನು ತೋರಿಸಿ, ನೋಡು ಮಗು ಈ ದೇವಸ್ಥಾನದ ಸುತ್ತಮುತ್ತ  ಒಂದು ಗಿಡ ಮರ ಹೂ ಬಳ್ಳಿಗಳು ಚಿಗುರುವುದಿಲ್ಲ. ಏಕೆಂದರೆ ಅಲ್ಲಿ ಲೆಕ್ಕವಿಲ್ಲದಷ್ಟು ಇರುವೆ ಗೂಡುಗಳಿವೆ. ಇದರಿಂದ ಗಿಡ ಮರಗಳು ಬೆಳೆಯುವುದಿಲ್ಲ.  ನೀನು ಅಲ್ಲಿರುವ ಇರುವೆ ಗೂಡುಗಳನ್ನು ನಾಶ ಮಾಡಬೇಕು. ಆದರೆ, ಒಂದೇ ಒಂದು ಇರುವೆಯ ಜೀವಕ್ಕೆ ಹಾನಿಯಾಗಬಾರದು ಎಂದರು. ಗುರುಗಳು ಹೇಳಿದಂತೆ ಆತ ಗು

ದಿನಕ್ಕೊಂದು ಕಥೆ 1091

*🌻ದಿನಕ್ಕೊಂದು ಕಥೆ🌻* *ನಾನು ಎಂಬ ಅಹಂ ನ ನಾಶ* ಅಣಶಿ ಅಭಯಾರಣ್ಯ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಳಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ಈ ಅರಣ್ಯದಲ್ಲಿ ಕಪ್ಪು ಚಿರತೆ, ಹುಲಿ ಮತ್ತು ಆನೆ ಮುಖ್ಯ ಪ್ರಾಣಿಗಳಾಗಿವೆ. ಈ ಅಭಯಾರಣ್ಯದ ದಟ್ಟವಾದ ಶೋಲಾ ಕಾಡಿನ ನಡುವೆ ಪಾತಗುಡಿ ಎಂಬ ಪುಟ್ಟ ಹಳ್ಳಿ ಇದೆ. ಇಲ್ಲಿ ಕುಣಬಿ ಬುಡಕಟ್ಟು ಜನಾಂಗದ‌  ಹದಿಮೂರು ಮನೆಗಳು ಇವೆ. ನಗರ ಪ್ರಪಂಚದ ಸೋಂಕು  ಸ್ವಲ್ಪವೂ ಇಲ್ಲದ ಈ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ  ಪಾಠಶಾಲೆ ಇದೆ. ಈ ಶಾಲೆಗೆ ತಗಡಿನ ಶೀಟಿನ ಚಾವಣಿ. ಪ್ರಶಾಂತ ಎಂಬ ಸ್ಥಳೀಯ ತರುಣನೊಬ್ಬ ಇಲ್ಲಿಯ ಅಧ್ಯಾಪಕ.     ಪುನೀತ್ ರಾಜಕುಮಾರ್  ರವರು ತಮ್ಮ  ಚಿತ್ರ ಗಂಧದಗುಡಿ ಚಿತ್ರಿಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಹಾಗೆಯೇ ಇಲ್ಲಿಯ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳಿಗೆ "ನಾನು ಯಾರು ನಿಮಗೆ ಗೊತ್ತಾ"? ಎಂದು ಕೇಳಿದಾಗ ಆ ಮಕ್ಕಳು ಗೊತ್ತಿಲ್ಲವೆಂದು ತಲೆಯಾಡಿಸಿದರು. ಹೋಗಲಿ ನಮ್ಮ ತಂದೆ ಯಾರೆಂದು ಗೊತ್ತಾ? ಎಂದು ಕೇಳಿದಾಗ, ಅದಕ್ಕೂ ಇಲ್ಲವೆಂದು ಉತ್ತರಿಸಿದವು ಮಕ್ಕಳು. ಸಿನಿಮಾ ಟಿವಿಗಳ ಸಂಪರ್ಕವೇ ಇಲ್ಲದ ಈ ನಿಸರ್ಗ ಪ್ರದೇಶದಲ್ಲಿ ಸಿಕ್ಕ ಉತ್ತರದಿಂದ ಪುನೀತ್ ಒಮ್ಮೆ ನಕ್ಕರಂತೆ. ನಾವು ಮಹಾನ್ ಪ್ರಸಿದ್ದರು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ. ಈ ಮಕ್ಕಳ ಉತ್ತರ ನಾನು ಎಂಬ ಸಣ್ಣ ಅಹಂಕಾರವನ್ನು ಕರಗಿಸಿ ಬಿಟ್ಟಿತು ಎಂದುಕೊಂಡರಂತೆ. ಎರಡು ದಿನಗಳ ಕಾಲ,ಈ  ಮಕ್ಕ

ದಿನಕ್ಕೊಂದು ಕಥೆ 1090

*🌻ದಿನಕ್ಕೊಂದು ಕಥೆ🌻* *ಚುಕ್ತಾ* ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಎಂಟನೇಯ ತರಗತಿ ಯಲ್ಲಿ ಓದುತ್ತಿದ್ದ ಶಾರದಾ, ದಿನ ನಿತ್ಯ  ಸುಮಾರು ನಾಲ್ಕು ಕಿಮೀ ದೂರದ ತನ್ನ ಹಳ್ಳಿಯಿಂದ ನಡೆದು ಬರುತ್ತಿದ್ದಳು.ಆಕೆ ಆಟ-ಪಾಠ ಮತ್ತಿತರೇ ಶಾಲಾ ಚಟುವಟಿಕೆಗಳಲ್ಲಿ ಮಾಡಿದ ಅದ್ಭುತ  ಸಾಧನೆ ಪರಿಗಣಿಸಿದ ಪಟ್ಟಣದ ರೋಟರಿ ಸಂಸ್ಥೆ ಯವರು ಅಂದು ಶಾಲಾವರಣದಲ್ಲಿ ಇರಿಸಿಕೊಂಡಿದ್ದ ಸಮಾರಂಭದಲ್ಲಿ ಶಾರದಾಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ್ದರು.ಅಂದು ಅವಳಿಗೆ ಪ್ರಶಸ್ತಿ ಪತ್ರ ದೊಂದಿಗೆ ನಗದು ಹಣ ಐನೂರು ರೂಪಾಯಿ  ಕೂಡ ಕೊಟ್ಟು ಪ್ರೋತ್ಸಾಹಿಸಿದ್ದರು.ತನ್ನ ಕಲ್ಪನೆಯಲ್ಲೂ, ಊಹಿಸದ ಶಾರದಾ,ಆ ಪ್ರಶಸ್ತಿ ಸ್ವೀಕರಿಸಿದಾಗ ಹರ್ಷಚಿತ್ತಳಾಗಿ ಅವಳಿಗೆ ಅರಿವಿಲ್ಲದೇ ಆನಂದ ಭಾಷ್ಪ ಸುರಿಸುತ್ತಿದ್ದಳು.ಅಧ್ಯಕ್ಷರ ಸೂಚನೆಯಂತೆ ಎರಡು ಮಾತು ಹೇಳು ಎಂದಾಗ ಮುಗ್ಧ ಮನಸ್ಸಿನ ಶಾರದಾ, ತನಗೆ ಕೊಟ್ಟ ಪ್ರಶಸ್ತಿಯನ್ನು ಎರಡೂ ಕೈಯಲ್ಲಿ ಹಿಡಿದು ನೆರೆದ ಜನಗಳಿಗೆ ತೋರಿಸುತ್ತ "ಇದೆಲ್ಲಾ.. ನನ್ನ ಅಮ್ಮನ ಪ್ರೇರಣೆ ಹಾಗೂ ಗುರುಗಳ ಪ್ರೋತ್ಸಾಹ ಮತ್ತು ಆಶೀರ್ವಾದದ ಫಲ "ಎಂದಷ್ಟೇ ಹೇಳಿ,ಹಸನ್ಮುಖಳಾಗಿ ತನ್ನ ಸೀಟಿನ ಮೇಲೆ ಹೋಗಿ ಕುಳಿತಳು.ಆ ಕಾರ್ಯಕ್ರಮ ಮುಗಿಯಲು ಇನ್ನೂ ಕನಿಷ್ಠ ಒಂದು ಗಂಟೆ ಬೇಕಿತ್ತು.ಇತ್ತ ಶಾರದಾ ಮನದಲ್ಲಿ", ಯಾವಾಗ ಕಾರ್ಯಕ್ರಮ ಮುಗಿಯತ್ತೋ... ಯಾವಾಗ ತಾನು ಅಮ್ಮನಿಗೆ ವಿಷಯ ತಿಳಿಸೇನು"ಎಂದು ಚಡಪಡಿಸತೊಡಗಿದ್ದಳು. ಅಂತೂ ಆ ಕಾರ್ಯಕ್

ದಿನಕ್ಕೊಂದು ಕಥೆ 1089

*🌻ದಿನಕ್ಕೊಂದು ಕಥೆ🌻* *ಕಲಿಕೆ  ಎಂಬುದು ಅವರವರ ಇಚ್ಛಾನುಸಾರ* ಪ್ರತಿಯೊಬ್ಬ ತಂದೆ ತಾಯಿಯ ಆಸೆ, ತಮ್ಮ ಮಗ  ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕೆಂದು.  ಹೀಗೆ ಒಬ್ಬ ತಂದೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರು ಆಗಬೇಕೆಂದು ಬಯಸಿದ್ದ. ಆದರೆ ಮಗನಿಗೆ  ಚಿತ್ರ ಕಲೆಯಲ್ಲಿ ಆಸಕ್ತಿ . ತಂದೆಗೆ, ಚಿತ್ರಕಲೆಯಿಂದ ಏನು ಸಾಧಿಸಲು ಸಾಧ್ಯ ? ಅದರಿಂದ  ಇವನು ಮುಂದಿನ ಜೀವನ ನಡೆಸಲು ಹೇಗೆ ಸಾಧ್ಯ, ಎಂದು ಅವನಿಗೆ ಅದರ ಬಗ್ಗೆ ಅಸಡ್ಡೆ. ಹಾಗಾಗಿ ಅವನು  ಮಗನಿಗೆ ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕೆಂದು  ಬಲವಂತ ಮಾಡ ತೊಡಗಿದ.ತಂದೆಯ ಈ ವರ್ತನೆಯಿಂದ ಮಗ ಮಂಕಾಗುತ್ತಾ ಬಂದ.  ತನಗಿಷ್ಟವಿಲ್ಲದ ಓದು ಬರಹದಲ್ಲಿ  ಆಸಕ್ತಿ ಕಳೆದುಕೊಂಡ.      ಆ ವರ್ಷ ಫೇಲಾಗಿಯೂ ಬಿಟ್ಟ. ಇದನ್ನು ಸಹಿಸಿಕೊಳ್ಳಲು ‌ತಂದೆಯಿಂದ  ಸಾಧ್ಯವಾಗಲ್ಲಿಲ್ಲ. ನನ್ನ ಮರ್ಯಾದೆಯನ್ನು ಕಳೆದ ನೀನು, ಇನ್ನೆಂದಿಗೂ  ನನ್ನನ್ನು ಮಾತನಾಡಿಸಬೇಡ ಎಂದ. ದುಃಖ ಗೊಂಡ ಮಗ, ಇನ್ನಷ್ಟು ಖಿನ್ನತೆಗೆ ಒಳಗಾದ.     ಒಮ್ಮೆ ಇವನ ಅಜ್ಜ ಇವನನ್ನು ನೋಡಿಕೊಂಡು ಹೋಗಲೆಂದು ಮನೆಗೆ ಬಂದ. ಅವನಿಗೆ  ಮನೆಯ ಪರಿಸ್ಥಿತಿ ಎಲ್ಲವೂ ಅರ್ಥವಾಯಿತು. ಹೇಗಾದರೂ ಮಾಡಿ ಮೊಮ್ಮಗನನ್ನು ಸರಿಪಡಿಸಬೇಕು  ಎನ್ನುವ ಉದ್ದೇಶದಿಂದ, ತನ್ನ ಮಗನನ್ನು ಕೂರಿಸಿಕೊಂಡು ಮಾತನಾಡತೊಡಗಿದ.     ಮಗನೇ ,ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ. ನನ್ನ ಮಗ ಹೇಗೆ ದೊಡ್ಡ ಮನುಷ್ಯನಾಗಬೇಕೆಂದು ನಾನು  ಆಸೆ ಪಟ್ಟೆನೊ, ಹಾಗೆಯೇ ,ನೀನೂ ಕೂಡ ನಿನ್ನ

ದಿನಕ್ಕೊಂದು ಕಥೆ 1088

*🌻ದಿನಕ್ಕೊಂದು ಕಥೆ🌻* ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....? ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....  ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.  ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.  ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು. ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು

ದಿನಕ್ಕೊಂದು ಕಥೆ 1087

*🌻ದಿನಕ್ಕೊಂದು ಕಥೆ🌻* ಶ್ರೀರಾಮ ವನವಾಸದ ಸಮಯದಲ್ಲಿ ಕಾಡಲ್ಲಿ ನಡೆದುಕೊಂಡು ಹೋಗುವಾಗ ಸಾಕ್ಷಾತ್ ವನದೇವಿ ಪ್ರತ್ಯಕ್ಷಳಾಗಿ 'ರಾಮ, ನಿನಗಾಗಿ ನಾನು ಏನು ಸೇವೆ ಮಾಡಬಹುದು' ಎಂದು ಕೇಳುತ್ತಾಳೆ. ರಾಮ: ನಾನು ಇದುವರೆಗೂ ನಡೆದುಕೊಂಡು ಬರುವಾಗ ದಾರಿಯಲ್ಲಿ ತುಂಬಾ ಮುಳ್ಳುಗಳಿದ್ದವು ಅವುಗಳನ್ನು ತೆಗೆದುಹಾಕು. ವನದೇವಿ: ನೀನು ಈಗಾಗಲೇ ನಡೆದುಕೊಂಡು ಬಂದ ಜಾಗದಲ್ಲಿ ಮುಳ್ಳು ತೆಗೆದು ಲಾಭವಿಲ್ಲ, ನೀನು ಮುಂದೆ ನಡೆಯುವ ದಾರಿಯಲ್ಲಿ ಮುಳ್ಳು ತೆಗೆಯುತ್ತೇನೆ ರಾಮ: ಇಲ್ಲ, ಹಿಂದೆ ನನ್ನ ತಮ್ಮ ಭರತ ಬರುತ್ತಿದ್ದಾನೆ. ಅವನಿಗೆ ಮುಳ್ಳು ಚುಚ್ಚಬಾರದು. ವನದೇವಿ: ಯಾಕೆ ನಿನ್ನ ತಮ್ಮ ಅಷ್ಟು ಬಲಹೀನನಾ? ರಾಮ: ಇಲ್ಲ, ನನ್ನ ತಮ್ಮ ತುಂಬಾ ಶಕ್ತಿವಂತ. ಈ ಮುಳ್ಳುಗಳು ಅವನಿಗೆ ಚುಚ್ಚಿದರೆ 'ನಮ್ಮಣ್ಣ ಈ ಮುಳ್ಳಿನ ದಾರಿಯಲ್ಲಿ ಹೋದನಾ ಎಂದುಕೊಂಡು ದುಃಖ ಪಡ್ತಾನೆ. ನನ್ನ ತಮ್ಮ ದುಃಖಿತನಾದರೆ ನನಗೆ ನೋವಾಗತ್ತೆ. ಅದಕ್ಕಾಗಿ ಆ ಮುಳ್ಳುಗಳನ್ನು ತೆಗಿ ಎಂದು ಕೇಳಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ರಾಮಾಯಣದಲ್ಲಿ ಅಣ್ಣ ತಮ್ಮಂದಿರು ಎಷ್ಟು ಆಪ್ತವಾಗಿದ್ದರು ಎಂದು ಇದರಿಂದ ತಿಳಿಯುತ್ತೆ. ************************************** *ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ* ಒಮ್ಮೆ ಅಪ್ಪ ಮಗ ಸಮುದ್ರಯಾನ ಮಾಡ್ತಾ ಇದ್ರು. ದೋಣಿ ಮುಳುಗೋ ಪರಿಸ್ಥಿತಿ ಬಂತು ಹಾಗೂ ಹೀಗೂ ಒಂದು ಸಣ್ಣ ದ್ವೀಪ ತಲುಪುತ್ತಾರೆ. ಈ ಪರಿಸ್ಥಿತಿಯಲ್ಲಿ ದೇವರ

ದಿನಕ್ಕೊಂದು ಕಥೆ 1086

*🌻ದಿನಕ್ಕೊಂದು ಕಥೆ🌻* *ಬದಲಾವಣೆಯತ್ತ ಒಂದೊಂದೇ‌ ಹೆಜ್ಜೆ.*  ‌ ‌ಡಾಕ್ಟರ್ ಶಿಗಾಕಿ ಹಿನೋಹರಾ ಜಪಾನಿನ  ಅತ್ಯಂತ ಪ್ರಸಿದ್ಧ ವೈದ್ಯರು. ನೂರಾಐದು ವರ್ಷ ಬದುಕಿ ಬಾಳಿದ್ದ‌ ಅವರು ಕೊನೆಯವರೆಗೂ ನಿವೃತ್ತರಾಗದೇ, ಚಟುವಟಿಕೆಯಿಂದಿದ್ದರು .     ಅವರಲ್ಲಿಗೆ ಒಬ್ಬ ಮಹಿಳೆ ಸಲಹೆಗಾಗಿ ಬಂದಳು. ಆಕೆಗೆ ಹೆಚ್ಚುತ್ತಿರುವ ತೂಕದಿಂದ ಹಲವಾರು ಖಾಯಿಲೆಗಳೂ  ಕಾಣಿಸಿಕೊಂಡಿದ್ದವು. ಬಹಳ ಒತ್ತಡದ ಜೀವನ‌ಶೈಲಿಯ ಆಕೆಗೆ, ವ್ಯಾಯಾಮ ಮಾಡಲಾಗಲೀ,ನಡೆಯಲಾಗಲಿ, ಸಮಯವಿರಲಿಲ್ಲ. ಡಾಕ್ಟರ್ ಶಿಗಾಕಿಯವರಿಗೆ , ಇದು ತಕ್ಷಣಕ್ಕೆ ಪರಿಹಾರವಾಗುವಂತಹ ಸಮಸ್ಯೆಯಲ್ಲಾ ಎಂದು ಗೊತ್ತಾಯಿತು. ಆಗ ಅವರು, ನಿಮಗೆ ದಿನಾ ಹಾಡು ಕೇಳುವ ಅಭ್ಯಾಸ ವಿದೆಯಾ ? ಎಂದು ಮಹಿಳೆಯನ್ನು ಕೇಳಿದರು.ಆಕೆ ಹೌದೆಂದು ತಲೆ ಅಲ್ಲಾಡಿಸಿದಳು. ಹಾಗಾದರೆ, ಒಂದು ವಾರ ಯಾವುದಾದರೂ ಹಾಡಿಗೆ ದಿನಕ್ಕೊಂದು ನಿಮಿಷದಂತೆ ನೃತ್ಯ ಮಾಡಲಾಗುವುದೇ? ಎಂದು ಕೇಳಿದರು ವೈದ್ಯರು. ಆಗ ಆ ಮಹಿಳೆ, ಮುಗುಳ್ನಗುತ್ತಾ, ಓಹ್, ಒಂದು ನಿಮಿಷ ತಾನೇ, ಅಷ್ಟು ಸಮಯವಿಲ್ಲದೆ ಏನು? ಎಂದು ನೃತ್ಯ ಮಾಡಲು ಒಪ್ಪಿಕೊಂಡಳು.    ಒಂದು ವಾರ ಬಿಟ್ಟು  ಮತ್ತೆ ಆಕೆ ವೈದ್ಯರ ಬಳಿಗೆ ಬಂದಾಗ, ಶಿಗಾಕಿ ಯವರು, ಇಡೀ ಹಾಡಿಗೆ ದಿನವೂ ನೃತ್ಯಮಾಡಲು ಸಮಯವಿದೆಯೇ? ಎಂದು ಕೇಳಿದರು. ಅದಕ್ಕೂ ಆ ಮಹಿಳೆ ಸಂತೋಷದಿಂದ ಒಪ್ಪಿಕೊಂಡಳು. ಹಾಗೆ ಮುಂದಿನ ವಾರ ಬಂದಾಗ, ಎರಡು ಹಾಡುಗಳ ನೃತ್ಯ ಮಾಡಲು ಹೇಳಿದರು, ಅದಾದ ಮೇಲೆ ನೃತ್ಯದ  ಜೊತೆಗೆ  ಕೆಲವು ಸುಲಭ ವ್ಯಾಯಾಮ

ದಿನಕ್ಕೊಂದು ಕಥೆ 1085

*🌻ದಿನಕ್ಕೊಂದು ಕಥೆ🌻* ಇವತ್ತು ಎಲ್ಲರ ಬಾಯಲ್ಲಿ ಬರ್ತಾ ಇರೋದು ಅದೊಂದೇ ಹೆಸರು... ಅರುಣ್ ಯೋಗಿರಾಜ್. ಎಲ್ಲೋ ಎಂಬಿಎ ಮಾಡ್ತಾ ಇದ್ದ ಹುಡುಗನಿಗೆ ಅನ್ನಿಸಿರಬೇಕು... ಅನ್ನಿಸೋದು ಚಿಕ್ಕ ಪದ, ಪ್ರೇರಣೆ ಆಗಿರಬೇಕು. ಅಷ್ಟು ದುಡ್ಡು ಕೊಟ್ಟು ಓದಿ, ಕೆಲಸಕ್ಕೂ ಹೋಗ್ತಾ, ಕೀಬೋರ್ಡ್ ಕುಟ್ಟುತ್ತಾ ಇರೋ ವ್ಯಕ್ತಿಯೊಬ್ಬ, ಇಲ್ಲಪಾ ನಾನು ಅದ್ಯಾವುದೋ ಕಲ್ಲು ಕುಟ್ಟೋ ಕೆಲಸಕ್ಕೆ ಹೋಗ್ತೀನಿ ಅಂದಾಗ ಅರುಣನ ಅಪ್ಪನೇ ಮೊದಲು ಒಪ್ಪಿರಲಿಲ್ಲ ಅನ್ನೋದನ್ನ ತಿಳಿದುಕೊಂಡೆ. ನಾನು ಈ ಕ್ಷೇತ್ರಕ್ಕೆ ತಡವಾಗಿ ಬಂದೆ ಅಂತ ಅರುಣ್ ಖುದ್ದು ಮಾಧ್ಯಮಗಳ ಮುಂದೆ ಹೇಳ್ತಾನೇ ಇರ್ತಾರೆ... ಯಾವ್ ಯಾವುದೋ ಅಡಕೆ ಕುಟ್ಟೋ ಕುಟ್ಟಾಣಿಗಳನ್ನೆಲ್ಲ ಮಾಡ್ತಾ ಮಾಡ್ತಾ ಇವತ್ತು ರಾಮನ ವಿಗ್ರಹ ಮಾಡಿ ಆತ ತನ್ನ ಜನ್ಮವನ್ನೇ ಪಾವನ ಮಾಡ್ಕೊಂಡಿದಾನೆ. ಯಾವುದು ಸಿಕ್ಕಾಗ ಇನ್ನೇನು ಬೇಡ ಅನ್ಸುತ್ತೋ ಅದಕ್ಕೆ ಶ್ರಮಿಸಬೇಕು ಅಂತ ಅಧ್ಯಾತ್ಮ ಹೇಳುತ್ತೆ. ತಡವಾಗಿ ಬಂದೆ ಈ ಕ್ಷೇತ್ರಕ್ಕೆ ಅನ್ನುವ ಅರುಣ್ ಯೋಗಿರಾಜ್ಗೆ ದೇವರು ಆ ಆನಂದವನ್ನ ಇಷ್ಟು ಬೇಗ ದಯಪಾಲಿಸಿದ್ದಾನೆ ಅಂದ್ರೆ, ಅವತ್ತು ಕಂಪನಿಗೆ ರಾಜೀನಾಮೆ ಹಾಕೋ ಆತನ ನಿರ್ಧಾರ ಪ್ರೇರಣೆಯೇ ಆಗಿತ್ತು ಅನ್ನೋದಕ್ಕೆ ಇದಕ್ಕಿಂತ ಇನ್ನೇನ್ ಸಾಕ್ಷಿ ಬೇಕು ಹೇಳಿ? ನಿಮ್ಮ ಮನಸ್ಸು ಹೇಳುವ ಯಾವ ಕೆಲಸ ಮಾಡೋದಕ್ಕೂ ಯಾವತ್ತಿಗೂ ತಡ (ಲೇಟ್) ಅಂತ ಇಲ್ಲವೇ ಇಲ್ಲ ಅನ್ನೋದನ್ನ ವಿಶ್ವದ ಸಾಧಕರು ಸಾರಿ ಸಾರಿ ಹೇಳಿದ್ದಾರೆ. ಇದೊಂದು ಪ್ರಕರಣದಿಂದ ನಾವು ಕಲಿಯಬಹ

ದಿನಕ್ಕೊಂದು ಕಥೆ 1084

*🌻ದಿನಕ್ಕೊಂದು ಕಥೆ🌻*         *ಸಂಸ್ಕಾರ* "ಅರ್ರೇ..... ದೀಪಕ್, ಈ  ರೂಮಿನಲ್ಲಿ ಒಬ್ರು ಅಜ್ಜೀ ಇದ್ದಾರಲ್ಲಾ?" ದಿವ್ಯಾ, ದೀಪಕ್ ನಿಗೆ ಕೇಳುತ್ತಾಳೆ. ಈ ದಿವ್ಯಾ ದೀಪಕ್ ನ ಮದುವೆಯಾಗಿ ಎರಡು ಮೂರು ದಿನ ಆಗಿತ್ತಷ್ಟೆ. ಶ್ರೀಮಂತ ಕುಟುಂಬದಿಂದ ಬಂದ ದಿವ್ಯಾ, ಅಷ್ಟೇ ಶ್ರೀಮಂತ ಕುಟುಂಬದ ಸೊಸೆಯಾಗಿ ಬಂದಿದ್ದಳು. ಅಂದು ದೀಪಕ್ ತನ್ನ ಬಂಗ್ಲೆ ಯಂತಿದ್ದ ದೊಡ್ಡ ಮನೆಯನ್ನು  ಪತ್ನಿಗೆ ಒಂದೊಂದಾಗಿ ತೋರಿಸಲು ಬಂದಾಗ, ಮಹಡಿ ಮೇಲಿನ ಒಂದು ರೂಮಿಗೆ ಬರುತ್ತಾರೆ. ಆಗ ದಿವ್ಯಾ. ಆಗ ರೀತಿ ಪ್ರಶ್ನೆ ಮಾಡಿದಾಗ ಆಕೆಯ ಪ್ರಶ್ನೆ ಗೆ ದೀಪಕ್ " ಹಾಂ... ಹೌದು, ಇದ್ದರು" ಎನ್ನುತ್ತಾನೆ. ಆತನ ಮಾತಿಗೆ ಹೌಹಾರಿದ ದಿವ್ಯಾ "ಅಂದ್ರೆ.. ಅವರು...ಈಗ" ಎಂದು ಅನುಮಾನದಿಂದ ಕೇಳಿದಾಗ  ದೀಪಕ್ ಅದಕ್ಕೆ " ಇದ್ದಾರೆ.. ಅವರು ವೃದ್ಧಾಶ್ರಮ ದಲ್ಲಿ"ಎಂದು ಉತ್ತರಿಸುತ್ತಾನೆ. ಪುನಃ ದಿವ್ಯಾ -" ಮತ್ತೆ ಆವತ್ತು ನಿಶ್ಚಿತಾರ್ಥದ ದಿವಸ ಇಲ್ಲೇ ಇದ್ರಲ್ಲ... ಮದುವೆ ಮನೆಯಲ್ಲಿ ಕಾಣಲೇ ಇಲ್ವಲ್ಲ" ಎಂದಾಗ ದೀಪಕ್ " ಮದುವೆ ಮನೆ ಅಂದ್ರೆ ತುಂಬಾ ಗಲಾಟೆ .. ಗದ್ದಲ ಇರುತ್ತೆ, ಅದು ಅವರಿಗೆ ಆಗಿ ಬರಲ್ಲ ಅಂತ, ಡ್ಯಾಡಿ, ನಿಶ್ಚಿತಾರ್ಥ ಮುಗಿದ ದಿನವೇ ಅವರನ್ನು ಮತ್ತೆ ವೃದ್ಧಾಶ್ರಮ ಕ್ಕೆ ಬಿಟ್ಟು ಬಂದಿದ್ದಾರೆ " ಎನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದ  ದಿವ್ಯಾ" ಆ ಅಜ್ಜೀ ನಿಮಗೇನಾಗಬೇಕು?" ಎಂದು

ದಿನಕ್ಕೊಂದು ಕಥೆ 1083

🌻 *ದಿನಕ್ಕೊಂದು ಕಥೆ* 🌻        *ಅರ್ಚಕನ ಬೆಲೆ*                                                 ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು. ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು. ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೇ ಕೆಲವೇ ಸಮಯದಲ್ಲಿ ಶ್ರೀಮಂತನಾದ ಎಂದರೆ ಅವನು ಅಕ್ರಮ ರೀತಿಯಲ್ಲಿ ಧನಸಂಪಾದನೆ ಮಾಡಿರಬೇಕು. ಆದ್ದರಿಂದ ಆ ಅರ್ಚಕನ ಅಕ್ರಮ ಸಂಪಾದನೆಯ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಪ್ರಾರ್ಥನೆ. ' ಜಡ್ಜ್ ಮೊದಲು ಆ ಅರ್ಚಕನನ್ನು ಪ್ರಶ್ನೆ ಮಾಡಿದರು "ನಿಮ್ಮ ಮೇಲೆ ಅಕ್ರಮ ಧನ ಸಂಪಾದನೆಯ ಆರೋಪವಿದೆ. ನಿಮ್ಮ ಸಂಪಾದನೆ ಸಕ್ರಮವೋ ಅಕ್ರಮವೋ ಸ್ಪಷ್ಟ ಪಡಿಸಿ" ಅರ್ಚಕರು ಹೇಳಿದರು "ಅಯ್ಯಾ, ನನ್ನ ಬಳಿಯಿರುವ ಧನವೆಲ್ಲಾ ಸಕ್ರಮವಾಗಿ ನನಗೆ ಬಂದಿದ್ದು". ಜಡ್ಜ್ ಸವಾಲು ಹಾಕಿದರು. "ಸಾಧಾರಣ ಅರ್ಚಕವೃತ್ತಿಯಿಂದ ಬದುಕುತ್ತಿರುವ ನೀವು ಗಳಿಸಿದ್ದೆಲ್ಲಾ ಸಕ್ರಮವಾಗಿ ಎಂದು ಹೇಗೆ ನಂಬುವುದು?" ಅರ್ಚಕರು ಹೇಳುತ್ತಾರೆ, "ಅಯ್ಯಾ, ಒಂದು ದಿನ ನಾನು ಊರಿನ ಕೆರೆಯಬಳಿ ಸಂಧ್ಯಾವಂದನೆಯಲ್ಲಿರುವಾಗ ಸಂಜೆಯ ಮಬ್ಬು ಬೆಳಕಿನಲ್ಲಿ ಯಾರೋ ಇಬ್ಬರು ಕೆರೆಯಂಚಿನಲ್ಲಿ ನಿಂತು ಅಳುವುದು ಕೇಳಿಸಿ ನಾನು ಅಲ್ಲಿಗೆ ಧಾವಿಸಿದೆ. ದಂಪತಿಗಳು ಇಬ್ಬರು ಕೆರೆಗೆ ಹಾರಿ ಆ